ಕಾಮನ ಕೊಂದು ಪಟ್ಟಕ್ಕೆ ನಿಂದ
ಕಾಮರಾಜರಾಜನು, ರಾಜಾಧಿರಾಜನು.
ಗಂಡರನೆಲ್ಲರ ಹೆಂಡಿರ ಮಾಡಿ ನೆರೆವ ವೈಶಿಕ, ಕಾಮಿನೀ ಕೇಳಾ,
ಇಂತಪ್ಪ ಕಾಮಿ ಎನಗತಿ ಕಾಮಿಸಿ ನೆರೆದು
ಕಾಮಸಿದ್ಧಿಯನೀವನು ಉರಿಲಿಂಗದೇವನು.
Transliteration Kāmana kondu paṭṭakke ninda
kāmarājarājanu, rājādhirājanu.
Gaṇḍaranellara heṇḍira māḍi nereva vaiśika, kāminī kēḷā,
intappa kāmi enagati kāmisi neredu
kāmasid'dhiyanīvanu uriliṅgadēvanu.