ಮಹಾಬೆಳಗಿನ ಲಿಂಗವ ಕೈಯಲ್ಲಿ ಕೊಟ್ಟಡೆ,
ಕೊರಳಲ್ಲಿ ಕಟ್ಟಿಕೊಳ್ಳಲೇಕೆ?
ನೋಡುವ ಕಣ್ಣು ಮುಚ್ಚಿದ ಮತ್ತೆ, ತನಗೆ ಎಡೆಯಾಟವುಂಟೆ?
ಲಿಂಗವ ಹಿಂಗದೆ ಅಂಗೈಯಲ್ಲಿ ಕೊಟ್ಟ ಮತ್ತೆ,
ಚಿತ್ತದಲ್ಲಿ ಹಿಂಗದಿರಬೇಕು.
ಉರಿಲಿಂಗತಂದೆಯ ಸಿರಿಯ ಭಾಷೆ.
Transliteration Mahābeḷagina liṅgava kaiyalli koṭṭaḍe,
koraḷalli kaṭṭikoḷḷalēke?
Nōḍuva kaṇṇu muccida matte, tanage eḍeyāṭavuṇṭe?
Liṅgava hiṅgade aṅgaiyalli koṭṭa matte,
cittadalli hiṅgadirabēku.
Uriliṅgatandeya siriya bhāṣe.