ಲಿಂಗ ಕರಸ್ಥಲಕ್ಕೆ ಬಂದ ಮತ್ತೆ ಕಂಗಳು
ತುಂಬಿವರಿಯದಿರ್ದಡೆ,
ಆ ಲಿಂಗಪೂಜೆಯಾಕೆ?
ಲಿಂಗ ಜಿಹ್ವೆಯಲ್ಲಿ ನೆನೆವಾಗ ಅಂಗವ ಮರೆಯದಿರ್ದಡೆ
ಆ ಲಿಂಗದ ನೆನಹದೇಕೆ?
ಲಿಂಗವಾರ್ತೆಯ ಕಿವಿತುಂಬ ಕೇಳಿ
ಸರ್ವಾಂಗ ಝೊಂಪಿಸಿ ಮನಮಗ್ನವಾಗಿ ಇರದಿರ್ದಡೆ,
ಉರಿಲಿಂಗತಂದೆಯ ಸಿರಿಯ ನೆನೆಯಲೇಕೆ?
Transliteration Liṅga karasthalakke banda matte kaṅgaḷu
tumbivariyadirdaḍe,
ā liṅgapūjeyāke?
Liṅga jihveyalli nenevāga aṅgava mareyadirdaḍe
ā liṅgada nenahadēke?
Liṅgavārteya kivitumba kēḷi
sarvāṅga jhompisi manamagnavāgi iradirdaḍe,
uriliṅgatandeya siriya neneyalēke?