•  
  •  
  •  
  •  
Index   ವಚನ - 5    Search  
 
ದೊಡ್ಡವೆರಡು ಕಂಬದ ಮಧ್ಯದಲ್ಲಿ ಚಿಕ್ಕವೆರಡು ಕಂಬ. ಇಂತೀ ನಾಲ್ಕರ ಮಧ್ಯದ ಮನೆಗೆ ಅಸ್ಥಿಯ ಗಳು, ನರದ ಕಟ್ಟು, ಮಜ್ಜೆಯ ಸಾರ, ಮಾಂಸದ ಗೋಡೆ, ಚರ್ಮದ ಹೊದಿಕೆ, ಶ್ರೋಣಿತದ ಸಾರದ, ಕುಂಭದಿಂದಿಪ್ಪುದೊಂದು ಚಿತ್ರದ ಮನೆ ನೋಡಯ್ಯಾ. ಆ ಮನೆಗೊಂಬತ್ತು ಬಾಗಿಲು, ಇಡಾ ಪಿಂಗಳವೆಂಬ ಗಾಳಿಯ ಬಾದಳ, ಮೃದು ಕಠಿಣವೆಂಬವೆರಡು ಅಗುಳಿಯ ಭೇದ ನೋಡಾ, ಇತ್ತಲೆಯ ಮೇಲಿಪ್ಪ ಸುಷುಮ್ನಾನಾಳವ ಮುಚ್ಚಿ, ದಿವಾರಾತ್ರಿಯೆಂಬ ಅರುಹು ಮರಹಿನ ಉಭಯವ ಕದಕಿತ್ತು ನೋಡಯ್ಯಾ. ಮನೆ ನಷ್ಟವಾಗಿ ಹೋದಡೆಯೂ ಮನೆಯೊಡೆಯ ಮರಳಿ ಮತ್ತೊಂದು ಮನೆಗೆ ಬಪ್ಪುದು ತಪ್ಪದು ನೋಡಯ್ಯಾ ಇಂತಪ್ಪ ಮನೆಗೆನ್ನ ಮರಳಿ ಬಾರದಂತೆ ಮಾಡಯ್ಯಾ, ಕಾಮಭೀಮ ಜೀವಧನದೊಡೆಯ ನಿಮ್ಮ ಧರ್ಮ ನಿಮ್ಮ ಧರ್ಮ.
Transliteration Doḍḍaveraḍu kambada madhyadalli cikkaveraḍu kamba. Intī nālkara madhyada manege asthiya gaḷu, narada kaṭṭu, majjeya sāra, mānsada gōḍe, carmada hodike, śrōṇitada sārada, kumbhadindippudondu citrada mane nōḍayyā. Ā manegombattu bāgilu, iḍā piṅgaḷavemba gāḷiya bādaḷa, mr̥du kaṭhiṇavembaveraḍu aguḷiya bhēda nōḍā, ittaleya mēlippa suṣumnānāḷava mucci, divārātriyemba aruhu marahina Ubhayava kadakittu nōḍayyā. Mane naṣṭavāgi hōdaḍeyū maneyoḍeya maraḷi mattondu manege bappudu tappadu nōḍayyā intappa manegenna maraḷi bāradante māḍayyā, kāmabhīma jīvadhanadoḍeya nim'ma dharma nim'ma dharma.