ಒಂದು ಯೋನಿಯಲ್ಲಿ ಬಂದ ದುಃಖವ ನಾನು
ಎಂದೆಂದಿಗೂ ಕಳೆಯಲಾರೆ
ಇನ್ನು ಎಂಬತ್ತುನಾಲ್ಕುಲಕ್ಷವೆಂದರೆ, ನಾನಿನ್ನೇವೆನಯ್ಯಾ?
ಒಂದುವನರಿಯದ ಶಿಶು ನಾ ನೊಂದೆನಯ್ಯಾ!
ಎನ್ನ ಕಂದ ಬಾ ಎಂದು, ಕಂಬನಿಯ ತೊಡೆದೆತ್ತಿ,
ಆನಂದದಿಂದ ಕಣ್ದೆರೆ ಉಳಿಯುಮೇಶ್ವರಾ.
Transliteration Ondu yōniyalli banda duḥkhava nānu
endendigū kaḷeyalāre
innu embattunālkulakṣavendare, nāninnēvenayyā?
Onduvanariyada śiśu nā nondenayyā!
Enna kanda bā endu, kambaniya toḍedetti,
ānandadinda kaṇdere uḷiyumēśvarā.