ಹಸುವಿಂಗೊಂದು ಕಚ್ಚು, ಎತ್ತಿಂಗೆರಡು ಕಚ್ಚು,
ಕರುವಿಂಗೆ ಮೂರು ಕಚ್ಚು.
ಇಂತಿವ ನೋಡಿ ಮೇಯಿಸಿಕೊಂಡು
ತೊಂಡುಹೋಗದಂತೆ ಕಾಯಿದೊಪ್ಪಿಸಬೇಕು
ಗೋಪತಿನಾಥ ವಿಶ್ವೇಶ್ವರಲಿಂಗದರಿಕೆಯಾಗಿ.
Transliteration Hasuviṅgondu kaccu, ettiṅgeraḍu kaccu,
karuviṅge mūru kaccu.
Intiva nōḍi mēyisikoṇḍu
toṇḍ'̔uhōgadante kāyidoppisabēku
gōpatinātha viśvēśvaraliṅgadarikeyāgi.