•  
  •  
  •  
  •  
Index   ವಚನ - 46    Search  
 
ತುಂಬಿ ಕುಸುಮದ ಬಂಡುಂಡಂತೆ ಕುಸುಮದಂಗ ಹರಿಯದೆ ಸುಗಂಧ ಆತ್ಮನಲ್ಲಿ ತುಂಬಿ ತುಂಬಿದ್ದಂತೆ ಕುಂಡಲಿ ಕೀಟಕನ ತಂದು ಮೃತ್ತಿಕೆಯ ಮಂದಿರದಲ್ಲಿ ಇರಿಸಿ ಆ ಬೆಂಬಳಿಯಲ್ಲಿ ಝೇಂಕರಿಸಲಾಗಿ ಅದು ತನ್ನ ಭೀತಿಯಿಂದ ಮತ್ತೆ ಬಂದಿತ್ತಲ್ಲಾ ಎಂದು ತಾ ಸತ್ತೆಹೆನೆಂಬ ಸಂದೇಹದಿಂದ ಮೂರ್ಛೆ ಕರಿಗೊಂಡು ಕೀಟಕನಂಗವಳಿದು ಕುಂಡಲಿಯಾದ ತೆರದಂತೆ ಈ ಗುಣ ಅಂಗಲಿಂಗ ಮೂರ್ತಿಧ್ಯಾನ ನಿಂದಲ್ಲಿ ಪ್ರಾಣಲಿಂಗಸಂಬಂಧ. ಅದು ತದ್ಭಾವ ನಿಜವಾದಲ್ಲಿ ಲಿಂಗಪ್ರಾಣಯೋಗ. ಉಭಯದ ಸಂದನಳಿದು ಸಂಬಂಧ ಸಂಬಂಧಾವಾದಲ್ಲಿ ಆ ವಸ್ತು ವಸ್ತುಲೇಪ ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
Transliteration Tumbi kusumada baṇḍuṇḍante kusumadaṅga hariyade sugandha ātmanalli tumbi tumbiddante kuṇḍali kīṭakana tandu mr̥ttikeya mandiradalli irisi ā bembaḷiyalli jhēṅkarisalāgi adu tanna bhītiyinda matte bandittallā endu tā sattehenemba sandēhadinda mūrche karigoṇḍu kīṭakanaṅgavaḷidu kuṇḍaliyāda teradante ī guṇa aṅgaliṅga mūrtidhyāna nindalli prāṇaliṅgasambandha. Adu tadbhāva nijavādalli liṅgaprāṇayōga. Ubhayada sandanaḷidu sambandha sambandhāvādalli ā vastu vastulēpa śambhuvininditta svayambhuvinindatta atibaḷa nōḍā, mātuḷaṅga madhukēśvaranu.