ನಸುಗಾಯವಡೆದವನಂತೆ ನೋವುಣ್ಣದೆ,
ಸತ್ರ್ಕೀವಂತನಂತೆ ಸಂದೇಹವಿಲ್ಲದೆ,
ಖಳನಿಚ್ಚಟನಂತೆ ಆತ್ಮಕ್ಕೆ ಸಂದು ಸಂಶಯವಿಲ್ಲದೆ,
ನೆರೆ ಅರಿದವನಂತೆ ಮರವೆಯ ಕುರುಹಿಗೆ ಬಾರದೆ,
ಲಿಂಗದಲ್ಲಿ ಕರಿಗೊಂಡವನಂತೆ ಕೊಟ್ಟಿಹೆ ಕೊಂಡೆಹೆನೆಂಬ
ಸೂತಕವಿಲ್ಲದೆ,
ಬೊಮ್ಮವನರಿದವನಂತೆ ಅವರಿವರಲ್ಲಿ ಸುಮ್ಮಾನದ ಸುಖವ
ನುಡಿಯದೆ,
ಘಟಕರ್ಮ ಯೋಗಿಯಂತೆ ಆ ದೇಹ ಇಂದ್ರಿಯಂಗಳಿಲ್ಲದೆ,
ಲಿಂಗಸಂಗಿಯಂತೆ ಭಾವಸರ್ವರ ಸಂಗ ಮಾಡದೆ
ಇಂತೀ ಸರ್ವಗುಣಸಂಪನ್ನ ನವಬ್ರಹ್ಮಿ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
Transliteration Nasugāyavaḍedavanante nōvuṇṇade,
satrkīvantanante sandēhavillade,
khaḷaniccaṭanante ātmakke sandu sanśayavillade,
nere aridavanante maraveya kuruhige bārade,
liṅgadalli karigoṇḍavanante koṭṭihe koṇḍ'̔ehenemba
sūtakavillade,
bom'mavanaridavanante avarivaralli sum'mānada sukhava
nuḍiyade,
ghaṭakarma yōgiyante ā dēha indriyaṅgaḷillade,
liṅgasaṅgiyante bhāvasarvara saṅga māḍade
intī sarvaguṇasampanna navabrahmi.
Śambhuvininditta svayambhuvinindatta atibaḷa nōḍā,
mātuḷaṅga madhukēśvaranu.