•  
  •  
  •  
  •  
Index   ವಚನ - 5    Search  
 
ಆದಿ ಆಧಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು, ಸುರಾಳನಿರಾಳವಿಲ್ಲದಂದು, ಶೂನ್ಯ ನಿಶ್ಯೂನ್ಯವಿಲ್ಲದಂದು, ಸಚರಾಚರವೆಲ್ಲ ರಚನೆಗೆ ಬಾರದಂದು, ಗುಹೇಶ್ವರಾ ನಿಮ್ಮ ಶರಣನುದಯಿಸಿದನಂದು.
Transliteration Ādi ādhāravilladandu, ham'mubim'mugaḷilladandu, surāḷanirāḷavilladandu, śūn'ya niśyūn'yavilladandu, sacarācaravella racanege bāradandu, guhēśvarā nim'ma śaraṇanudayisidanandu.
English Translation 2 When neither Source nor Substance was, When neither I nor mine, When neither Form nor Formless was, When neither Void was nor non-Void, Nor that which moves or moves not, Then was Guheśvara's votary born. Translated by: L M A Menezes, S M Angadi
Hindi Translation बिना आदि आधार के पूर्व, बिन अहंकार अभिमान के पूर्व, बिना सगुण निर्गुण के पूर्व, बिना शून्य निशून्य के पूर्व, बिना सचराचर की रचना आने के पूर्व, गुहेश्वरा, आपका शरण उदय हुआ | Translated by: Banakara K Gowdappa Translated by: Eswara Sharma M and Govindarao B N
Tamil Translation ஆதியும் ஆதாரமும் தோன்றுமுன்பு, செருக்கும் பெருமிதமும் தோன்றுமுன்பு, தூல, சூட்சுமப் படைப்பு தோன்றுமுன்பு, சராசரங்கள் அனைத்தும் தோன்றுமுன்பு, குஹேசுவரனே உம் சரணன் தோன்றினன். Translated by: Smt. Kalyani Venkataraman, Chennai
ಶಬ್ದಾರ್ಥಗಳು ಆದಿ = ಕಾಲದೊಂದಿಗೆ ಕಾಣಬಂದ ಸೃಷ್ಟಿ; ವಿಶ್ವ; ಆಧಾರ = ವಿಶ್ವಕ್ಕೆ ಮೂಲಕಾರಣವಾದ ಮಹಾಲಿಂಗ.; ನಿರಾಳ = ಹಾಗೆ ವೇದ್ಯವಾಗದ ಸೂಕ್ಷ್ಮಸೃಷ್ಟಿ; ಬಿಮ್ಮು = ವಿಸೃಷ್ಟವಾದ ಸಮಸ್ತತತ್ವ್ತಗಳ ಬಗೆಗಿನ ಅಭಿಮಾನ; ಸುರಾಳ = ಸಗುಣ, ಇಂದ್ರಿಯಗಳಿಗೆ ಸಹಜವಾಗಿಯೇ ವೇದ್ಯವಾಗುವ ಸ್ಥೂಲಸೃಷ್ಟಿ.; ಹಮ್ಮು = ಅಹಂ, ಪರವಸ್ತುವಿನಲ್ಲಿ ಮೊಟ್ಟಮೊದಲು ಕಾಣಬಂದ ಅಹಂಪ್ರಜ್ಞೆಯ ಮಿಡಿತ.; Written by: Sri Siddeswara Swamiji, Vijayapura

C-750 

  Tue 25 Mar 2025  

 ಶರಣು ಶರಣಾರ್ಥಿಗಳು 🙏🏻🙏🏻
  ಶಂಕರಪ್ಪ ಬೇವೂರ
????????