ತನಗೆ ಇದಿರಾದ ಗುರುವ ಕಳೆದು
ತಾನು ಗುರುವಾಗಿ ಗುರುವಾಗಬೇಕು.
ತಾ ಹರಕರಜಾತನಾಗಿ ನಿಂದು
ತನ್ನಯ ಭೃತ್ಯರ ಗುರುಕರಜಾತನ ಮಾಡಬೇಕು.
ತನ್ನಯ ಗುಣ ಜಡ,
ಇದಿರಿಗೆ ಅಜಡವ ಹೇಳುವ ನರ ಭಿನ್ನ
ಕಾರುಕಂಗೆ ಸದ್ಗುರುಸ್ಥಲವಿಲ್ಲ.
ಅದ ಅವನರಿಯ, ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
Transliteration Tanage idirāda guruva kaḷedu
tānu guruvāgi guruvāgabēku.
Tā harakarajātanāgi nindu
tannaya bhr̥tyara gurukarajātana māḍabēku.
Tannaya guṇa jaḍa,
idirige ajaḍava hēḷuva nara bhinna
kārukaṅge sadgurusthalavilla.
Ada avanariya, ninna nīnari,
puṇyāraṇyadahana bhīmēśvaraliṅga niraṅgasaṅga.