ಅಂಗಲಿಂಗ ಸಂಬಂಧ ಶೈವಗುರು,
ಸ್ಥಾವರಲಿಂಗ ಸಂಬಂಧ ಶೈವಗುರು,
ಪಥಲಿಂಗ ಸಂಬಂಧ ಶೈವಗುರು,
ಸಂಕಲ್ಪಲಿಂಗ ಸಂಬಂಧ ಶೈವಗುರು.
ಪ್ರಾಣಲಿಂಗ ಸಂಬಂಧ ವೀರಶೈವ
ಸಿದ್ಧಾಂತ ಗುರುವಾಗಬೇಕು.
ಚತುರ್ವಿಧ ಶೈವನಾಸ್ತಿ: ಅವು ಸೂತಕಭಾವ;
ಅವು ಜಗದ ವರ್ತಕದಲ್ಲಿ ಕಾಬ ನಿಲುವು;
ಆಚಾರ್ಯರ ಭೇದ,
ಪ್ರಾಣಕ್ಕೆ ಪಂಚಾಚಾರವ ಕೊಟ್ಟು,
ಕಾಯದ ಗುಣವ ತ್ರಿವಿಧದಿಂದ ಶುದ್ಧಮಾಡಿ,
ಕಾಯಕ್ಕೆ ಕ್ರೀ ಮನಕ್ಕೆ ಅರಿವು
ಎಂದು ಭಾವಿಸಿ ಕೊಟ್ಟುದ್ದುಪ್ರಾಣಲಿಂಗ
ಆತನಿಹಪರದಲ್ಲಿ ಪರಿಣಾಮಿ, ಸದ್ಗುರು;
ಆ ಭೇದವ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
Transliteration Aṅgaliṅga sambandha śaivaguru,
sthāvaraliṅga sambandha śaivaguru,
pathaliṅga sambandha śaivaguru,
saṅkalpaliṅga sambandha śaivaguru.
Prāṇaliṅga sambandha vīraśaiva
sid'dhānta guruvāgabēku.
Caturvidha śaivanāsti: Avu sūtakabhāva;
avu jagada vartakadalli kāba niluvu;
ācāryara bhēda,
prāṇakke pan̄cācārava koṭṭu,
kāyada guṇava trividhadinda śud'dhamāḍi,
kāyakke krī manakke arivu
endu bhāvisi koṭṭudduprāṇaliṅga
ātanihaparadalli pariṇāmi, sadguru;
ā bhēdava ninna nīnari,
puṇyāraṇyadahana bhīmēśvaraliṅga niraṅgasaṅga.