ನಾ ಬಂದುದಕ್ಕೆ ಮಾಡಿದೆ.
ನೀ ಕಳುಹಿದವರ ಕೊಂದೆ.
ಬಂದೆ ನೀವಿರಿಸಿದಂತಿದ್ದು
ಎನ್ನಗಿನ್ನು ಬಂಧ ಮೋಕ್ಷವೇಕೆ,
ಕಣ್ಣಯ್ಯಪ್ರಿಯ ಗೊಹೇಶ್ವರನ ಶರಣ
ಅಲ್ಲಮನ ಲೇಪವಾದವಂಗೆ.
Transliteration Nā bandudakke māḍide.
Nī kaḷuhidavara konde.
Bande nīvirisidantiddu
ennaginnu bandha mōkṣavēke,
kaṇṇayyapriya gohēśvarana śaraṇa
allamana lēpavādavaṅge.