ಎತ್ತು ಹಸುವ ಹಾಯಾಲಾಗಿ
ತೆಕ್ಕೆಯನಿಕ್ಕಿದ ಕಣ್ಣಿಯಲ್ಲಿ
ತೆಕ್ಕೆಗೆ ನಡೆಯದ ಹಸು,
ಕಟ್ಟುಗೊಳ್ಳದ ಹೋರಿ.
ಇವೆರಡ ಸಿಕ್ಕಿಸುವ ಪರಿಯಿನ್ನೆಂತೊ?
ಕಟ್ಟಿದ ಕಣ್ಣಿಯ ಕುಣಿಕೆ ಕಳಚಿ ಹೋರಿಯ ಕೊರಳಲ್ಲಿ
ಹೋಯಿತ್ತು,
ಹಸು ಬೆತ್ತಲೆಯಾಯಿತ್ತು,
ನಾರಾಯಣಪ್ರಿಯ ರಾಮನಾಥಾ.
Transliteration Ettu hasuva hāyālāgi
tekkeyanikkida kaṇṇiyalli
tekkege naḍeyada hasu,
kaṭṭugoḷḷada hōri.
Iveraḍa sikkisuva pariyinnento?
Kaṭṭida kaṇṇiya kuṇike kaḷaci hōriya koraḷalli
hōyittu,
hasu bettaleyāyittu,
nārāyaṇapriya rāmanāthā.