ಎನ್ನ ಹರಿ ಭಕ್ತಿಯಿಂದ ಸಾವಿರ ಕಮಲ ಕುಸುಮ ತಂದು
ಪಶುಪತಿಯ ಚರಣಕ್ಕೆ ಒಸೆದು ಮಾಡುತಿರಲಾಗಿ,
ಶಶಿಧರ ಒಂದು ಕುಸುಮವ ಕಡಿಮೆ ಮಾಡಲಾಗಿ,
ಹುಸಿಯ ಹೊರಲಾರದೆ ತೆಗೆದಿಕ್ಕಿದ ಕಣ್ಣು
ಕಾಲಸಂಹಾರನ ಕಾಲಲಿದೆ.
ಇದು ಕಾರಣ, ನಾರಾಯಣಪ್ರಿಯ ರಾಮನಾಥ.
Transliteration Enna hari bhaktiyinda sāvira kamala kusuma tandu
paśupatiya caraṇakke osedu māḍutiralāgi,
śaśidhara ondu kusumava kaḍime māḍalāgi,
husiya horalārade tegedikkida kaṇṇu
kālasanhārana kālalide.
Idu kāraṇa, nārāyaṇapriya rāmanātha.