•  
  •  
  •  
  •  
Index   ವಚನ - 21    Search  
 
ಐದು ಕೊಂಬಿನ ಮರನನೇರಿ ಮೂರು ಕಾಲಿನಲ್ಲಿ ಮೆಟ್ಟಿ ನಿಂದು ಎಲೆಯ ಮರೆಯ ಹಣ್ಣ ಕೊಯ್ದೆಹೆನೆಂದಡೆ ಕೊಂಬು ಕೊಯ್ಯಲೀಸದು ನೋಡಾ! ಮತ್ತೆ ಇಳಿವಡೆ ಮರನಿಲ್ಲ, ಹಿಡಿವಡೆ ಕೊಂಬಿಲ್ಲ, ಹರಿವಡೆ ಹಣ್ಣಿಲ್ಲ. ಈ ಗುಣ ಮರದ ಮರವೆಯೊ, ಮನವ ಮರವೆಯೊ? ಇದನರಿದವಂಗಲ್ಲದೆ ಒಡಗೂಡಲಿಲ್ಲ ನಾರಾಯಣಪ್ರಿಯ ರಾಮನಾಥಾ.
Transliteration Aidu kombina marananēri mūru kālinalli meṭṭi nindu eleya mareya haṇṇa koydehenendaḍe kombu koyyalīsadu nōḍā! Matte iḷivaḍe maranilla, hiḍivaḍe kombilla, harivaḍe haṇṇilla. Ī guṇa marada maraveyo, manava maraveyo? Idanaridavaṅgallade oḍagūḍalilla nārāyaṇapriya rāmanāthā.