ಮಾತಿನಲ್ಲಿ ಬಲೋತ್ತರವಂತರೆಲ್ಲರೂ ಆತನನರಿದುದಿಲ್ಲ
ಆತ ಏತರೊಳಗೂ ಸಿಕ್ಕದ ಅಜಾತ ಶಂಭು.
ಆತನ ನೀತಿಯನರಿವುದಕ್ಕೆ ಅಸುರ ಕರ್ಮವ ಬಿಟ್ಟು
ವೇಷದಿಂದಾದ ಘಾತಕತನವನೊಲ್ಲದೆ
ಭಕ್ತಿಯೆಂಬ ಆಶೆ ಕುರಿತು ಪೋಷಣವ ಹೊರೆಯದೆ
ನಿಜ ತತ್ವದ ಆಶೆಯೇ ಸಾಕಾರವಾಗಿ
ಅರಿದ ಆತ್ಮ ಕರಿಗೊಂಡಲ್ಲಿ
ಹರಿಪ್ರಿಯ ಅಘೋರನಾಶನ ರಾಮನಾಥಾ.
Transliteration Mātinalli balōttaravantarellarū ātananaridudilla
āta ētaroḷagū sikkada ajāta śambhu.
Ātana nītiyanarivudakke asura karmava biṭṭu
vēṣadindāda ghātakatanavanollade
bhaktiyemba āśe kuritu pōṣaṇava horeyade
nija tatvada āśeyē sākāravāgi
arida ātma karigoṇḍalli
haripriya aghōranāśana rāmanāthā.