•  
  •  
  •  
  •  
Index   ವಚನ - 86    Search  
 
ಲಾಭವ ಕಾಬ ಬೆವಹಾರಿ ನಷ್ಟಕ್ಕೆ ಇಕ್ಕುವನೆ? ಅದು ತನ್ನ ಸಿಕ್ಕಿಸಿ ಬಹು ತಾನರಿಯ. ಈ ಉಭಯವ ತಿಳಿದಲ್ಲಿ ಲಾಭ ನಷ್ಟ ದಿವರಾತ್ರಿಯಂತೆ ಮಾಟ ಕೂಟದ ಒದಗು. ವಿಶ್ವಾಸದಲ್ಲಿ ಲಾಭ, ಅದು ಹೀನವಾದಲ್ಲಿ ನಷ್ಟ. ಇಂತೀ ನಷ್ಟ ಲಾಭವ ಬಿಟ್ಟು ಸುಚಿತ್ತ ನಿರ್ಮಲಾತ್ಮಕನಾಗಿ ಅರಿದು ಕರಿಗೊಳ್ಳಬೇಕು. ನಾರಾಯಣಪ್ರಿಯ ರಾಮನಾಥನಲ್ಲಿ ಚಿತ್ತಶುದ್ಧನಾಗಿರಬೇಕು.
Transliteration Lābhava kāba bevahāri naṣṭakke ikkuvane? Adu tanna sikkisi bahu tānariya. Ī ubhayava tiḷidalli lābha naṣṭa divarātriyante māṭa kūṭada odagu. Viśvāsadalli lābha, adu hīnavādalli naṣṭa. Intī naṣṭa lābhava biṭṭu sucitta nirmalātmakanāgi aridu karigoḷḷabēku. Nārāyaṇapriya rāmanāthanalli cittaśud'dhanāgirabēku.