ಇಂದ್ರಜಾಲ ಗಾಂಧರ್ವನಗರಾದಿಗಳ ಭ್ರಮೆಯ
ಹುಸಿಯೆಂದು ಕಾಣಬಹುದಲ್ಲದೆ
ಪ್ರಮಾಣಿಸಬಾರದು.
ಸ್ತ್ರೀಯಲ್ಲ ಪುರುಷನಲ್ಲ ನಪುಂಸಕನಲ್ಲ ಆತ್ಮನೆಂದು
ಅರಿಯಬಹುದಲ್ಲದೆ ಕಾಣಿಸಬಾರದು.
ದೇಹಾದಿ ಗುಣಧರ್ಮ ಕರ್ಮಂಗಳು ತಾನಲ್ಲ,
ಇವು ತನ್ನವಲ್ಲವೆಂದು ತಿಳಿಯಬಹುದು.
ಅದು ಮಾಯಾಮಯ ಪ್ರಾರಂಭ ಕೆಡೆಕೆಡುಗು.
ನೀತಿ ಕ್ರಮದಿಂದ ಭೋದ್ಯದೀಪ್ತಿ ತಾನೆಂದು
ಅರಿದರಿವು ನೀನೇ,
ಸಿಮ್ಮಲಿಗೆಯ ಚೆನ್ನರಾಮಂಗಾವ ದುಃಖವೂ ಇಲ್ಲ.
Transliteration Indrajāla gāndharvanagarādigaḷa bhrameya
husiyendu kāṇabahudallade
pramāṇisabāradu.
Strīyalla puruṣanalla napunsakanalla ātmanendu
ariyabahudallade kāṇisabāradu.
Dēhādi guṇadharma karmaṅgaḷu tānalla,
ivu tannavallavendu tiḷiyabahudu.
Adu māyāmaya prārambha keḍekeḍugu.
Nīti kramadinda bhōdyadīpti tānendu
aridarivu nīnē,
sim'maligeya cennarāmaṅgāva duḥkhavū illa.