ಇಹಪರವೆಂಬ ಇದ್ದೆಸೆಯಾಗಿರ್ದನಪರಿ ಹೊಸತು!
ನೆಯಿ ಹತ್ತದ ನಾಲಗೆಯಂತೆ,
ಹುಡಿ ಹತ್ತದ ಗಾಳಿಯಂತೆ,
ಕಾಡಿಗೆ ಹತ್ತದ ಆಲಿಯಂತೆ ಇರ್ದೆನಯ್ಯಾ!
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ
ಆಚರಿಸುತ್ತ ಆಚರಿಸುತ್ತ ಆಚರಿಸದಂತಿರ್ದೆ ನೋಡಯ್ಯಾ!
Transliteration Ihaparavemba iddeseyāgirdanapari hosatu!
Neyi hattada nālageyante,
huḍi hattada gāḷiyante,
kāḍige hattada āliyante irdenayyā!
Sim'maligeya cennarāmanemba liṅgadalli
ācarisutta ācarisutta ācarisadantirde nōḍayyā!