ತಮ ತಮಗೆ ಜ್ಞಾತೃವಿಲ್ಲ ಜ್ಞಾನವಿಲ್ಲ ಜ್ಞೇಯವಿಲ್ಲೆನಲು
ಆರಿಗೆ ತೋರೂದೊ?
ಜಗವಿನ್ನಾರಿಗೆ ತೋರೂದೊ ನಿನ್ನ?
'ನಿಜಾನಂದಾನುಭಾವಸ್ಯ ಸರ್ವಸಾಕ್ಷಿಕ ಯೋಗಿನಃ' ಎಂದುದಾಗಿ
ಇಂತು ಶಬ್ದಾದಿ ಸಕಲ ವಿಷಯಂಗಳೊಳಗಾದ
ಜೀವನ್ಮನವೆ ಸರ್ವಸಾಕ್ಷಿಯಾಗಿ ನಿಲಬಲ್ಲಾತನೆ
ಸಿಮ್ಮಲಿಗೆಯ ಚೆನ್ನರಾಮ ತಾನೆ!
Transliteration Tama tamage jñātr̥villa jñānavilla jñēyavillenalu
ārige tōrūdo?
Jagavinnārige tōrūdo ninna?
'Nijānandānubhāvasya sarvasākṣika yōginaḥ' endudāgi
intu śabdādi sakala viṣayaṅgaḷoḷagāda
jīvanmanave sarvasākṣiyāgi nilaballātane
sim'maligeya cennarāma tāne!