ನೆನೆದೆನೆಂಬಲ್ಲಿ ಎನ್ನ ಮನದಿಂದ ತೊಲಗಿಪ್ಪನೆ?
ಅರಿದೆನೆಂಬಲ್ಲಿ ಎನಗೆ ಆತಗೆ ಕಂಡರಿತವುಂಟೆ?
ಇಲ್ಲದ ಮಾತ ತಂದು ಅಲ್ಲಲ್ಲಿ ಆಡುವಿರಿ!
ನಿಮ್ಮ ಬಲ್ಲತನಕ್ಕೆ ನಾನಂಜುವೆ ಕಾಣಿರೊ!
ಸಲ್ಲದು! ನಿಮ್ಮ ಮಾತು ನಿಲ್ಲಲಿ!
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು
ನಾನೆ ಕಾಣಾ! ಜಡನೆ!
Transliteration Nenedenemballi enna manadinda tolagippane?
Aridenemballi enage ātage kaṇḍaritavuṇṭe?
Illada māta tandu allalli āḍuviri!
Nim'ma ballatanakke nānan̄juve kāṇiro!
Salladu! Nim'ma mātu nillali!
Sim'maligeya cennarāmanemba liṅgavu
nāne kāṇā! Jaḍane!