•  
  •  
  •  
  •  
Index   ವಚನ - 111    Search  
 
ಮಣ್ಣ ಕಳೆದು ಮಡಕೆಯಿಲ್ಲ. ಹೊನ್ನ ಕಳೆದು ತೊಡಿಗೆಯಿಲ್ಲ. ತನ್ನ ಕಳೆದು ಜಗವಿಲ್ಲ; ತಾನೇ ತನ್ನಿಂದನ್ಯವಿಲ್ಲ. ಸುಖ ದುಃಖ ಬಂಧಮೋಕ್ಷಗಳಿಲ್ಲದ ನಾಹಂ ಎಂದೆನಲಿಲ್ಲ, ಕೋಹಂ ಎಂದೆನಲಿಲ್ಲ, ಸೋಹಂ ಎಂದೆನಲಿಲ್ಲ. ನುಡಿಗೆ ಎಡೆಯೆನಿಸಿ, ಏನೂ ಇಲ್ಲದ ಸಚ್ಚಿದಾನಂದ ನಿತ್ಯಪರಿಪೂರ್ಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
Transliteration Maṇṇa kaḷedu maḍakeyilla. Honna kaḷedu toḍigeyilla. Tanna kaḷedu jagavilla; tānē tannindan'yavilla. Sukha duḥkha bandhamōkṣagaḷillada nāhaṁ endenalilla, kōhaṁ endenalilla, sōhaṁ endenalilla. Nuḍige eḍeyenisi, ēnū illada saccidānanda nityaparipūrṇa nīnē, sim'maligeya cennarāmā.