ಹುಲ್ಲ ಮನುಷ್ಯನ ಕಂಡು
ಹುಲ್ಲೆ ತಾ ಬೆದರುವಂತೆ ಇಲ್ಲದ ಶಂಕೆಯನುಂಟೆಂಬನ್ನಕ್ಕ
ಅದಲ್ಲಿಯೇ ರೂಪಾಯಿತ್ತು.
ಹೇಡಿಗಳನೇಡಿಸಿ ಕಾಡಿತ್ತು
ಸಿಮ್ಮಲಿಗೆಯ ಚೆನ್ನರಾಮನೆಂಬ ಭಾವದ ಗಸಣಿ.
Transliteration Hulla manuṣyana kaṇḍu
hulle tā bedaruvante illada śaṅkeyanuṇṭembannakka
adalliyē rūpāyittu.
Hēḍigaḷanēḍisi kāḍittu
sim'maligeya cennarāmanemba bhāvada gasaṇi.