ಬ್ರಹ್ಮಾಂಡದಲ್ಲಿ ತೋರುವ ಗುಣ ಅಂಡದಲ್ಲಿ ಕಲೆನಿಲುವಂತೆ,
ಅಂಡದಲ್ಲಿ ಜನಿಸುವ ಗುಣ ಪಿಂಡದಲ್ಲಿ ಪ್ರಮಾಣಿಸುವಂತೆ,
ಪಿಂಡದಲ್ಲಿ ಪ್ರಮಾಣಿಸುವ ಗುಣ
ಸರ್ವಚೇತನದಲ್ಲಿ ಚೇತರಿಸುವಂತೆ,
ಚೈತನ್ಯಾತ್ಮಕ ನೀನೇ,
ಕಾಲಾಂತಕ ಭೀಮೇಶ್ವರಲಿಂಗವು ತಾನೆ.
Transliteration Brahmāṇḍadalli tōruva guṇa aṇḍadalli kaleniluvante,
aṇḍadalli janisuva guṇa piṇḍadalli pramāṇisuvante,
piṇḍadalli pramāṇisuva guṇa
sarvacētanadalli cētarisuvante,
caitan'yātmaka nīnē,
kālāntaka bhīmēśvaraliṅgavu tāne.