ಭಕ್ತನ ಭಕ್ತ, ಮಾಹೇಶ್ವರನ ಮಾಹೇಶ್ವರ,
ಪ್ರಸಾದಿಯ ಪ್ರಸಾದಿ,
ಪ್ರಾಣಲಿಂಗಿಯ ಪ್ರಾಣಲಿಂಗಿ,
ಶರಣನ ಶರಣ, ಐಕ್ಯನ ಐಕ್ಯ.
ಒಳಗಿನ ಸ್ಥಲವ ಹೊರಹೊಮ್ಮುವಾಗ
ಬಿಂಬಕ್ಕೆ ಬಿಂಬದ ಪ್ರತಿಬಿಂಬವ ಕಾಬಂತೆ.
ಅದರ ಸಂಗವ ಘಟಿಸಿದಲ್ಲಿ ಷಡುಸ್ಥಲ ಬ್ರಹ್ಮವಾಯಿತ್ತು
ಕಾಲಾಂತಕ ಭೀಮೇಶ್ವರಲಿಂಗವನರಿದಲ್ಲಿ.
Transliteration Bhaktana bhakta, māhēśvarana māhēśvara,
prasādiya prasādi,
prāṇaliṅgiya prāṇaliṅgi,
śaraṇana śaraṇa, aikyana aikya.
Oḷagina sthalava horahom'muvāga
bimbakke bimbada pratibimbava kābante.
Adara saṅgava ghaṭisidalli ṣaḍusthala brahmavāyittu
kālāntaka bhīmēśvaraliṅgavanaridalli.