ಭ್ರಾಮಕದಲ್ಲಿ ಮಾಡದೆ, ಆಢ್ಯತನಕ್ಕೆ ಮಚ್ಚದೆ
ಸ್ತುತಿ ನಿಂದೆಗಳ ಗುರು ಲಿಂಗ ಜಂಗಮದಲ್ಲಿ ವಿಚಾರಿಸದೆ
ತಾ ಮಾಡುವ ದ್ರವ್ಯಕ್ಕೆ ವಿಶ್ವಾಸದ ಚಿತ್ತಕ್ಕೆ
ಉಭಯವನರಿದು ಮಾಡುವ ಭಕ್ತನ ಬಾಗಿಲೆ
ಕಾಲಾಂತಕ ಭೀಮೇಶ್ವರಲಿಂಗದ ಆಶ್ರಯ.
Transliteration Bhrāmakadalli māḍade, āḍhyatanakke maccade
stuti nindegaḷa guru liṅga jaṅgamadalli vicārisade
tā māḍuva dravyakke viśvāsada cittakke
ubhayavanaridu māḍuva bhaktana bāgile
kālāntaka bhīmēśvaraliṅgada āśraya.