ಸೌಭಾಗ್ಯದಿಂದ ಮಾಡುವರೆಲ್ಲರೂ ಸಂತೋಷಭಾವಿಗಳು.
ಭಕ್ತಿಯಿಂದ ಮಾಡುವರೆಲ್ಲರೂ ತ್ರಿವಿಧಭಾವಿಗಳು.
ಒಂದೆಂದು ಹಿಂಗಿ ಮಾಡುವನ್ನಬರ ರುದ್ರನ
ಉರಿಗೊಡಲಾಯಿತ್ತು.
ಬಂದುದ ನೇತಿಗಳೆಯದೆ ಬಾರದುದಕ್ಕೆ ದೋಟಿಯನಿಕ್ಕದೆ
ಬಂದುದಕ್ಕೆ ಮನಮುಕ್ತನಾಗಿ ಸಂದುದು
ಕಾಲಾಂತಕ ಭೀಮೇಶ್ವರಲಿಂಗಕ್ಕರ್ಪಿತವಾಯಿತ್ತು.
Transliteration Saubhāgyadinda māḍuvarellarū santōṣabhāvigaḷu.
Bhaktiyinda māḍuvarellarū trividhabhāvigaḷu.
Ondendu hiṅgi māḍuvannabara rudrana
urigoḍalāyittu.
Banduda nētigaḷeyade bāradudakke dōṭiyanikkade
bandudakke manamuktanāgi sandudu
kālāntaka bhīmēśvaraliṅgakkarpitavāyittu