•  
  •  
  •  
  •  
Index   ವಚನ - 31    Search  
 
ಖದ್ಯೋತ ಕೀಟಕವ ಮುಚ್ಚಿರಿಸಿದಲ್ಲಿ ಮತ್ತೆ ಉಂಟೆ ಆ ಕಳೆ ದಿನಪನ ಬೆಳಗಿನಲ್ಲಿ? ಮತ್ತರಪ್ಪ ದುರ್ವಾಚಕರ ಮಾತಿನಮಾಲೆ ಸ್ವಯ ಸ್ವಾನುಭಾವಿಕರಲ್ಲಿ ಉಂಟೆ? ಆತ್ಮವಾದಿಯ ಮಾತು, ವೈದಿಕ ಕರ್ಮದ ಕ್ರೀ ಸಾಧಕನ ಶರೀರಧರ್ಮ ಈ ಗುಣ ಸದ್ಭಾವಿಯ ಸ್ವಯವ ಮುಟ್ಟದಾಗಿ. ಇಂತೀ ಅಭೇದ್ಯವಸ್ತುವನರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
Transliteration Khadyōta kīṭakava muccirisidalli matte uṇṭe ā kaḷe dinapana beḷaginalli? Mattarappa durvācakara mātinamāle svaya svānubhāvikaralli uṇṭe? Ātmavādiya mātu, vaidika karmada krī sādhakana śarīradharma ī guṇa sadbhāviya svayava muṭṭadāgi. Intī abhēdyavastuvanariyabēku cannabasavaṇṇapriya bhōgamallikārjunaliṅgadalli.