ತನ್ನ ತಾನರಿತೆನೆಂಬಲ್ಲಿ ತಾನಾರು? ಅರಿತುದೇನಯ್ಯಾ?
ತನ್ನ ಮರೆದು ಇದಿರಿಂಗೆ ಅರಿವ ಹೇಳುವಲ್ಲಿ
ಆ ಮರೆದ ಅರಿವಿಂಗೆ ಕುರುಹುಂಟೆ?
ಇಂತೀ ಉಭಯದಲ್ಲಿ ತಿಳಿದು ಮತ್ತೆ
ವಚನ ನಿರ್ವಚನವೆಂಬುದು ಎಲ್ಲಿ ಅಡಗಿತ್ತು ಹೇಳಾ?
ತನ್ನಲ್ಲಿ ತೋರಿದ ಸ್ವಪ್ನ ತನಗೆ ಭೀತಿ ನಿರ್ಭೀತಿಯಾದಂತೆ
ಇದಿರ ಘಟ್ಟಕ್ಕೆ ಪಡಿಪುಚ್ಚವುಂಟೆ?
ಇಂತೀ ಭಾವವ ತಿಳಿದಲ್ಲಿ ಆ ವಸ್ತು ತನಗೆ ಅನ್ಯಭಿನ್ನವಿಲ್ಲ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು.
Transliteration Tanna tānaritenemballi tānāru? Aritudēnayyā?
Tanna maredu idiriṅge ariva hēḷuvalli
ā mareda ariviṅge kuruhuṇṭe?
Intī ubhayadalli tiḷidu matte
vacana nirvacanavembudu elli aḍagittu hēḷā?
Tannalli tōrida svapna tanage bhīti nirbhītiyādante
idira ghaṭṭakke paḍipuccavuṇṭe?
Intī bhāvava tiḷidalli ā vastu tanage an'yabhinnavilla
cannabasavaṇṇapriya bhōgamallikārjunaliṅgavu.