•  
  •  
  •  
  •  
Index   ವಚನ - 9    Search  
 
ಪ್ರಸಾದವೆ ಅಂಗವಾದವನ ಇರವು ಎಂತುಟೆಂದಡೆ: ಒಳಗಿಲ್ಲದ ಕುಂಭ ಒಡೆದು ಹೋಳಾದಂತೆ ಮರೀಚಿಕಾಜಲವ ತುಂಬಿ ಸುರಿದ ಅಂಗದಂತಿರಬೇಕು. ಉರಿಯ ಮಧ್ಯದಲ್ಲಿ ನಷ್ಟವಾದ ಕರ್ಪುರದ ಗಿರಿಯಂತಿರಬೇಕು. ಮಹಾಪ್ರಸಾದವ ಕೊಂಡಲ್ಲಿ ಇದಿರು ಮುಯ್ಯಿಲ್ಲದಿರಬೇಕು. ಹರವರಿ ನಷ್ಟವಾಗಿ ದಹನ ಚಂಡಿಕೇಶ್ವರಲಿಂಗದಲ್ಲಿ ಒಳಗೂಡಿರಬೇಕು.
Transliteration Prasādave aṅgavādavana iravu entuṭendaḍe: Oḷagillada kumbha oḍedu hōḷādante marīcikājalava tumbi surida aṅgadantirabēku. Uriya madhyadalli naṣṭavāda karpurada giriyantirabēku. Mahāprasādava koṇḍalli idiru muyyilladirabēku. Haravari naṣṭavāgi dahana caṇḍikēśvaraliṅgadalli oḷagūḍirabēku.