ಎಂಟು ತಟ್ಟೆಯ ನೆಟ್ಟು, ಒಂಬತ್ತು ನೇಣು ಕಟ್ಟಿ
ಎಂಟ ಬಿಟ್ಟು ಒಂದೇ ನೇಣಿನಲ್ಲಿ ಹತ್ತಿ ಆಡುತ್ತಿರಲಾಗಿ
ತಟ್ಟೆ ಮುರಿದು, ಮೆಟ್ಟಿನಿಂದ ದಾರ ಕಿತ್ತು,
ನೋಡುವರ ದೃಷ್ಟಿ ಬಟ್ಟಬಯಲು
ರೇಕಣ್ಣಪ್ರಿಯ ನಾಗಿನಾಥನಲ್ಲಿಆಟವನಾಡಿದ ಅರಿದಾಗಿ.
Transliteration Eṇṭu taṭṭeya neṭṭu, ombattu nēṇu kaṭṭi
eṇṭa biṭṭu ondē nēṇinalli hatti āḍuttiralāgi
taṭṭe muridu, meṭṭininda dāra kittu,
nōḍuvara dr̥ṣṭi baṭṭabayalu
rēkaṇṇapriya nāgināthanalli'āṭavanāḍida aridāgi.