•  
  •  
  •  
  •  
Index   ವಚನ - 19    Search  
 
ಒಡೆಯರ ಸಹಪಂಕ್ತಿಯಲ್ಲಿ ಪರಿಯಾಣ ಅಡ್ಡಣಿಗೆಯನಿರಿಸಿಕೊಂಡು ಉಂಬ ಸಮಗ್ರಾಹಕನಲ್ಲ. ನಿಮ್ಮ ಶರಣರ ಪಾದೋದಕಕ್ಕಲ್ಲದೆ ಕೈಯಾನೆ. ನಿಮ್ಮ ಶರಣರ ಪ್ರಸಾದಕ್ಕಲ್ಲದೆ ಬಾಯ್ದೆರೆಯೆ. ನಿಮ್ಮ ಲಾಂಛನಧಾರಿಯ ಮನೆಯ ಪ್ರತಿಭೃತ್ಯನಾಗಿರಿಸಯ್ಯಾ ನೀನೆನ್ನ ರೇಕಣ್ಣಪ್ರಿಯ ನಾಗಿನಾಥಾ .
Transliteration Oḍeyara sahapaṅktiyalli pariyāṇa aḍḍaṇigeyanirisikoṇḍu umba samagrāhakanalla. Nim'ma śaraṇara pādōdakakkallade kaiyāne. Nim'ma śaraṇara prasādakkallade bāydereye. Nim'ma lān̄chanadhāriya maneya pratibhr̥tyanāgirisayyā nīnenna rēkaṇṇapriya nāgināthā.