•  
  •  
  •  
  •  
Index   ವಚನ - 35    Search  
 
ನಿಃಕಲಶಿವ ತಾನೆ ಗುರುರೂಪವಾಗಿ ಕೊಂಡಾಡಿದನಯ್ಯ ಬಸವಣ್ಣನು. ಆ ಬಸವಣ್ಣನಿಂದ ಬಹುರೂಪ ಧರಿಸಿ ಹಲವಾಕಾರವನಾಡಿ ಸಾಕಾರದಲ್ಲಿ ಸನುಮತನಾದೆನು. ನಿರಾಕಾರದಲ್ಲಿ ನಿರತವಾದ ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಲಿರ್ದೆನು.
Transliteration Niḥkalaśiva tāne gururūpavāgi koṇḍāḍidanayya basavaṇṇanu. Ā basavaṇṇaninda bahurūpa dharisi halavākāravanāḍi sākāradalli sanumatanādenu. Nirākāradalli niratavāda rēkaṇṇapriya nāgināthā basavaṇṇana śrīpādakke namō namō enutalirdenu.