ಪ್ರಣವಮಂತ್ರರೂಪ ಪರಶಿವನ ಚೈತನ್ಯ
ಎಲ್ಲಾ ಮಂತ್ರಂಗಳಿಗೆ ಚೈತನ್ಯವು.
ಎಲ್ಲಾ ತಂತ್ರಂಗಳಿಗೆ ಚೈತನ್ಯವು.
ಓಂಕಾರಂ ವ್ಯಾಪ್ತಿ ಸರ್ವತ್ರಂ ಓಂಕಾರಂ ಗೋಪ್ಯ ಮಾನವಂ|
ಓಂಕಾರಂ ನಾದರೂಪಂ ಚ ಓಂಕಾರಂ ಮಂತ್ರರೂಪಕಂ||
ಎಂದು, ಎಲ್ಲಾ ವೇದಂಗಳಿಗೆ ತಾನೆ ಚೈತನ್ಯವು.
ಇಂತಲ್ಲದಡೆ, ಎಲ್ಲಿಹದು ಜ್ಞಾನಸಾಮರ್ಥ್ಯವು.
ಅದು ಕಾರಣ, ಮಂತ್ರವೆ ಅವಯವವು
ರೇಕಣ್ಣಪ್ರಿಯ ನಾಗಿನಾಥಂಗೆ.
Transliteration Praṇavamantrarūpa paraśivana caitan'ya
ellā mantraṅgaḷige caitan'yavu.
Ellā tantraṅgaḷige caitan'yavu.
Ōṅkāraṁ vyāpti sarvatraṁ ōṅkāraṁ gōpya mānavaṁ|
ōṅkāraṁ nādarūpaṁ ca ōṅkāraṁ mantrarūpakaṁ||
endu, ellā vēdaṅgaḷige tāne caitan'yavu.
Intalladaḍe, ellihadu jñānasāmarthyavu.
Adu kāraṇa, mantrave avayavavu
rēkaṇṇapriya nāgināthaṅge.