ಅರಿವಿನಾಪ್ಯಾಯನವೆ ಅಪೂರ್ವ ಕಂಡಯ್ಯಾ.
ಪೂರ್ವಜ್ಞಾನವೆಂಬುದೆ ವೇದ,
ಶಾಸ್ತ್ರ ಆಗಮಂಗಳೆಂಬುವು
ಪೂರ್ಣ ಪ್ರಮಾಣ ಇವಲ್ಲ ಕಂಡಯ್ಯಾ.
ಇಂತೀ ಪ್ರಮಾಣವನರಿಯದೆ ನಿಂದ
ನಿಮ್ಮ ಶರಣರ ತೋರಾ, ಕಲಿದೇವಯ್ಯಾ.
Transliteration Arivināpyāyanave apūrva kaṇḍayyā.
Pūrvajñānavembude vēda,
śāstra āgamaṅgaḷembuvu
pūrṇa pramāṇa ivalla kaṇḍayyā.
Intī pramāṇavanariyade ninda
nim'ma śaraṇara tōrā, kalidēvayyā.