ಅಷ್ಟತನುವಿನಲ್ಲಿ ಹುಟ್ಟಿದ ನಿಷ್ಠಾಪರದಲ್ಲಿ, ಮುಟ್ಟುವ ಭರದಲ್ಲಿ,
ವಿದ್ಯೆಯೊಳಗಣ, ಧಾರಾಮಂಟಪದೊಳಗಣ ಸಹಜವನರಿದಂಗಲ್ಲದೆ
ಲಿಂಗವೆನಬಾರದು, ಜಂಗಮವೆನಬಾರದು, ಪ್ರಸಾದವೆನಬಾರದು.
ಧಾರಾಮಂಟಪದೊಳಗಣ ಸಹಜವನರಿಯದೆ
ಕರಣಂಗಳಿಗೆ ಗುರಿಯಾದರು, ಕರಣಲಿಂಗಾರ್ಚಕರಾದರು.
ಕರಣ ಮರಣ ತಪ್ಪದೆಂತೊ ?
ಇದೆಲ್ಲವನತಿಗಳೆದು ನಿಜಲಿಂಗಾರ್ಚನೆಯ ತೋರಿ,
ನಿಜೈಕ್ಯದೊಳಗಿರಿಸಿ ಬದುಕಿದಾತ ಬಸವಣ್ಣ ಕಾಣಾ ಕಲಿದೇವಯ್ಯ.
Transliteration Aṣṭatanuvinalli huṭṭida niṣṭhāparadalli, muṭṭuva bharadalli,
vidyeyoḷagaṇa, dhārāmaṇṭapadoḷagaṇa sahajavanaridaṅgallade
liṅgavenabāradu, jaṅgamavenabāradu, prasādavenabāradu.
Dhārāmaṇṭapadoḷagaṇa sahajavanariyade
karaṇaṅgaḷige guriyādaru, karaṇaliṅgārcakarādaru.
Karaṇa maraṇa tappadento?
Idellavanatigaḷedu nijaliṅgārcaneya tōri,
nijaikyadoḷagirisi badukidāta basavaṇṇa kāṇā kalidēvayya.