ಇರುಳು ಹಗಲೆಂದರಿಯದ ಅಂಧಕನ ಕೈಯಲ್ಲಿ
ಕೈದೀವಿಗೆ ಇರ್ದಡೇನು, ಪಥವ ನೋಡಿ ನಡೆಯಬಲ್ಲನೆ ?
ಗುರುಚರಪರವನರಿಯದ ದುರಾಚಾರಿಯ ಕೈಯಲ್ಲಿ
ಲಿಂಗವಿರ್ದಡೇನು, ಅವ ಸತ್ಯಸದಾಚಾರವನುಳ್ಳ
ಭಕ್ತಿವಂತರಿಗೆ ಸರಿಯಹನೆ ?
ಅವನು ಶಿವಭಕ್ತನಾಗಿ ಕೆಟ್ಟುಹೋದ ತೆರನೆಂತೆಂದಡೆ :
ಭಕ್ತರ ಗೃಹದಲ್ಲಿ ತುಡುಗ ತಿಂದ ನಾಯಿ,
ಮರಳಿ ಮತ್ತೆ ಹೊಲಸಿಂಗೆರಗಿದ ತೆರನಾಯಿತೆಂದ
ಕಲಿದೇವಯ್ಯ.
Transliteration Iruḷu hagalendariyada andhakana kaiyalli
kaidīvige irdaḍēnu, pathava nōḍi naḍeyaballane?
Gurucaraparavanariyada durācāriya kaiyalli
liṅgavirdaḍēnu, ava satyasadācāravanuḷḷa
bhaktivantarige sariyahane?
Avanu śivabhaktanāgi keṭṭuhōda teranentendaḍe:
Bhaktara gr̥hadalli tuḍuga tinda nāyi,
maraḷi matte holasiṅgeragida teranāyitenda
kalidēvayya.