•  
  •  
  •  
  •  
Index   ವಚನ - 108    Search  
 
ಒಡಲ ಹೊರೆವ ಇಚ್ಫೆಯಿಂದ, ಹಗಲೆನ್ನದೆ ಇರುಳೆನ್ನದೆ ಬೆಂದ ಬಸುರಿಂಗೆ ಕುದಿವುತ್ತಿದ್ದೇನೆ. ನಿಮ್ಮ ನೆನೆಯಲೂ ವೇಳೆಯಿಲ್ಲ, ಪೂಜಿಸಲೂ ವೇಳೆಯಿಲ್ಲ. ಒಂದು ವೇಳೆಯಾದರೂ ಶಿವಮಂತ್ರವ ಸ್ಮರಿಸ ತೆರಹಿಲ್ಲ. ಈ ಪ್ರಯಾಸವ ಬಿಡಿಸಿ, ನಿಮ್ಮ ನೆನೆವಂತೆ ಮಾಡಯ್ಯಾ, ಕಲಿದೇವರದೇವಾ, ನಿಮ್ಮ ಧರ್ಮ, ನಿಮ್ಮ ಧರ್ಮ.
Transliteration Oḍala horeva icpheyinda, hagalennade iruḷennade benda basuriṅge kudivuttiddēne. Nim'ma neneyalū vēḷeyilla, pūjisalū vēḷeyilla. Ondu vēḷeyādarū śivamantrava smarisa terahilla. Ī prayāsava biḍisi, nim'ma nenevante māḍayyā, kalidēvaradēvā, nim'ma dharma, nim'ma dharma.