•  
  •  
  •  
  •  
Index   ವಚನ - 185    Search  
 
ತಾರಾಧಾರ ಬಾಹ್ಯವ ಸೋಹಂಭಾವ ಭಾವಾಂತರ ವಾಮಶಕ್ತಿ ಮೋಹಶಕ್ತಿ ಕನ್ಯಾಶಕ್ತಿ ಬಾಲಶಕ್ತಿ ಗಣಶಕ್ತಿ ಮಂದಿರಶಕ್ತಿ ಶಿವದೇವ ಈಶ್ವರ ಮಹಾದೇವ ಪರಾಪರ ಶಿವ ಇಂತಿವೆಲ್ಲವ ಬಸವಣ್ಣ ತಪ್ಪಿಸಿ, ಈಸರಿಂದಾದ ಭಕ್ತಿಯ ಪ್ರಭಾವದೊಳಿರಿಸಿ, ಗತಿಯತ್ತ ಹೊದ್ದಲೀಯದೆ, ಮೋಕ್ಷದತ್ತ ಹೊದ್ದಲೀಯದೆ, ನಾಲ್ಕೂ ಪದದತ್ತ ಹೊದ್ದಲೀಯದೆ, ಅಭಿನವ ಕೈಲಾಸದತ್ತ ಹೊದ್ದಲೀಯದೆ, ಲಿಂಗಾರ್ಚನೆಯ ತೋರಿ, ಜಂಗಮಾರ್ಚನೆಯ ಹೇಳಿ, ಜಂಗಮನಿರಾಕಾರವೆಂದು ತೋರಿ, ಆ ಜಂಗಮ ಪ್ರಸಾದವ ಲಿಂಗಕ್ಕಿತ್ತು ಆರೋಗಿಸಿ, ಬಸವಣ್ಣ ತೋರಿದ ಕಾರಣ, ನಿರವಯದ ಹಾದಿಯ ಬಸವಣ್ಣನಿಂದ ಕಂಡೆನು ಕಾಣಾ, ಕಲಿದೇವಯ್ಯ.
Transliteration Tārādhāra bāhyava sōhambhāva bhāvāntara vāmaśakti mōhaśakti kan'yāśakti bālaśakti gaṇaśakti mandiraśakti śivadēva īśvara mahādēva parāpara śiva intivellava basavaṇṇa tappisi, īsarindāda bhaktiya prabhāvadoḷirisi, gatiyatta hoddalīyade, mōkṣadatta hoddalīyade, nālkū padadatta hoddalīyade, abhinava kailāsadatta hoddalīyade, liṅgārcaneya tōri, jaṅgamārcaneya hēḷi, jaṅgamanirākāravendu tōri, ā jaṅgama prasādava liṅgakkittu ārōgisi, basavaṇṇa tōrida kāraṇa, niravayada hādiya basavaṇṇaninda kaṇḍenu kāṇā, kalidēvayya.