ಪರಧನ ಪರಸತಿಗಳುಪಿದಡೆ,
ಮುಂದೆ ನರಕವೆಂದು ಗುರುವಾಕ್ಯ ಸಾರುತಿದೆ.
ಪರಧನ ಪರಸತಿಗಳುಪಿ
ಹತವಾಗಿ ಹೋದ ದುರ್ಯೋಧನ.
ಪಾಂಡವರ ಕಥೆಯ ಕೇಳಿ,
ಹರಿವ ನದಿಯ ಮಿಂದು, ಗೋದಾನ ಮಾಡುವ ನರಕಿಗಳ
ನುಡಿಯ ಕೇಳಲಾಗದೆಂದ, ಕಲಿದೇವರದೇವ
Transliteration Paradhana parasatigaḷupidaḍe,
munde narakavendu guruvākya sārutide.
Paradhana parasatigaḷupi
hatavāgi hōda duryōdhana.
Pāṇḍavara katheya kēḷi,
hariva nadiya mindu, gōdāna māḍuva narakigaḷa
nuḍiya kēḷalāgadenda, kalidēvaradēva