ಪರ್ವತಕ್ಕೆ ಕಂಬಿ ಕಾವಡಿಯ ಜೀಯರು ದ್ವಿಜರೊಯ್ವರಲ್ಲದೆ
ಜಂಗಮದೇವರೊಯ್ವರೆ?
ಆ ಜಂಗಮದೇವರ ಮೇಲೆ ಹೊರಿಸುವನೆ ಭಕ್ತ?
ಅವರು ಭಕ್ತರೊಡೆಯರಲ್ಲ.
ಅವರು ದೇವಲೋಕ ಮರ್ತ್ಯಲೋಕಕ್ಕೆ ಹೊರಗು.
ಹೊಯ್ಯೋ ಡಂಗುರವ, ಕಲಿದೇವರು ಸಾಕ್ಷಿಯಾಗಿ.
Transliteration Parvatakke kambi kāvaḍiya jīyaru dvijaroyvarallade
jaṅgamadēvaroyvare?
Ā jaṅgamadēvara mēle horisuvane bhakta?
Avaru bhaktaroḍeyaralla.
Avaru dēvalōka martyalōkakke horagu.
Hoyyō ḍaṅgurava, kalidēvaru sākṣiyāgi.