ಬಿತ್ತು ಬೆಳಸು ಸರ್ವಜೀವಕೀವನೊಬ್ಬನೆ.
ಮತ್ತೆ ಮರಳಿ ಅನ್ಯದೈವಕ್ಕೆರಗಬೇಕೊ?
ಪೃಥ್ವೀರಾಜವನಾಳುವವರು,
ಕಾದಿ ಹೋದವರ ಗೋತ್ರವಧೆಯಂ ಮಾಡಿ,
ಸತ್ತುಹೋದ ಪಾಂಡವರು.
ಜಗಕ್ಕೆ ಬಿತ್ತು ಬೆಳೆಯ ಕೊಟ್ಟನೆಂಬ
ನೀತಿಹೀನರ ನುಡಿಯ ಕೇಳಲಾಗದೆಂದ,
ಕಲಿದೇವರದೇವ.
Transliteration Bittu beḷasu sarvajīvakīvanobbane.
Matte maraḷi an'yadaivakkeragabēko?
Pr̥thvīrājavanāḷuvavaru,
kādi hōdavara gōtravadheyaṁ māḍi,
sattuhōda pāṇḍavaru.
Jagakke bittu beḷeya koṭṭanemba
nītihīnara nuḍiya kēḷalāgadenda,
kalidēvaradēva.