ಬೋಳಿಗೇಕೊ ತ್ರಿಭಸ್ಮಸುರೇಖೆ?
ಗುರುವಿಗೇಕೊ ಕೊನರು?
ಜಂಗಮಕ್ಕೇಕೊ ಭರವಶ?
ಲಿಂಗಕ್ಕೇಕೊ ಮುನ್ನೀರು?
ಭಕ್ತಂಗೇಕೊ ಖ್ಯಾತಿಯ ಲಾಭ?
ಇಂತಿವರು ತಾಳಬಿಟ್ಟು ಕುರಸವ ಕೊಂಡು,
ದಡಿಗೀಡಾಗಿ ಹೊಡೆಯಿಸಿಕೊಳಬೇಡ.
ಮುಂದೆ ಮೇಲಣವರುಹ ನೋಡಿ,
ಬದುಕೆಂದನು ಮಾಚಯ್ಯ, ಕಲಿದೇವರದೇವಾ.
Transliteration Bōḷigēko tribhasmasurēkhe?
Guruvigēko konaru?
Jaṅgamakkēko bharavaśa?
Liṅgakkēko munnīru?
Bhaktaṅgēko khyātiya lābha?
Intivaru tāḷabiṭṭu kurasava koṇḍu,
daḍigīḍāgi hoḍeyisikoḷabēḍa.
Munde mēlaṇavaruha nōḍi,
badukendanu mācayya, kalidēvaradēvā.