ಮಾಡುವ ಭಕ್ತಂಗೆ, ಒಲಿದ ದೇವಂಗೆ ಭೇದವುಂಟೆ ಅಯ್ಯಾ?
ಕಾಯದೊಳಗೆ ಕಾಯವಾಗಿಪ್ಪ, ಪ್ರಾಣದೊಳಗೆ ಪ್ರಾಣವಾಗಿಪ್ಪ.
ಅರಿದೆಹೆನೆಂದಡೆ ತಾನೆಯಾಗಿಪ್ಪ. ಅರಸಿ ಬಯಸಿದಡೆ ನಡೆದುಬಹನು.
ಕಲಿದೇವರದೇವನ ಬರವನೀಗಳೆ ತೋರಿ ಕೊಟ್ಟಿಹೆನು ಕೇಳಾ,
ಸಂಗನಬಸವಣ್ಣ.
Transliteration Māḍuva bhaktaṅge, olida dēvaṅge bhēdavuṇṭe ayyā?
Kāyadoḷage kāyavāgippa, prāṇadoḷage prāṇavāgippa.
Aridehenendaḍe tāneyāgippa. Arasi bayasidaḍe naḍedubahanu.
Kalidēvaradēvana baravanīgaḷe tōri koṭṭihenu kēḷā,
saṅganabasavaṇṇa.
Music
Courtesy: