•  
  •  
  •  
  •  
Index   ವಚನ - 293    Search  
 
ವೇದದಿಂದ ವೆಗ್ಗಳವಿಲ್ಲವೆಂಬಿರಿ, ವೇದ ಶಿವನ ಕಂಡುದಿಲ್ಲ. ಶಾಸ್ತ್ರ [ದಿಂದ ವೆಗ್ಗಳವಿಲ್ಲ] ವೆಂಬಿರಿ, ಶಾಸ್ತ್ರ ಶಿವನ ಕಂಡುದಿಲ್ಲ. ವೇದವೆಂಬುದು ವಿಪ್ರರ ಬೋಧೆ. ಶಾಸ್ತ್ರವೆಂಬುದು ಸಂತೆಯ ಗೋಷ್ಠಿ. ಅನುಭಾವದಿಂದ ತನ್ನೊಳಗಣ ತನುವ, ತಾನರಿತಂಥ ಭಕ್ತರಿಂದ ವೆಗ್ಗಳವಿಲ್ಲವೆಂದ, ಕಲಿದೇವರದೇವಯ್ಯ.
Transliteration Vēdadinda veggaḷavillavembiri, vēda śivana kaṇḍudilla. Śāstra [dinda veggaḷavilla] vembiri, śāstra śivana kaṇḍudilla. Vēdavembudu viprara bōdhe. Śāstravembudu santeya gōṣṭhi. Anubhāvadinda tannoḷagaṇa tanuva, tānaritantha bhaktarinda veggaḷavillavenda, kalidēvaradēvayya.