ಹಾಗದಾಸೆಗಾಗಿ ಹದಿನೆಂಟು ಜಾತಿಯ ತಂದು
ಶಿಷ್ಯರೆಂದು ಮಾಡುವ ಪರಿಯನೋಡಾ
ಅವರ ಆದಿ ಮಧ್ಯಾಂತವನರಿಯದೆ
ತಮ್ಮ ಪ್ರಾಣಲಿಂಗವ ಕೊಟ್ಟು ಲಿಂಗದ್ರೋಹಿಗಳಾದರು
ಪ್ರಸಾದವ ಕೊಟ್ಟು ಪ್ರಸಾದದ್ರೋಹಿಗಳಾದರು
ಪಂಚಾಚಾರವ ಹೇಳಿ ಪಂಚಮಹಾಪಾತಕಕ್ಕೆ ಒಳಗಾದರು
ಈಷಣತ್ರಯವೆಂಬ ತ್ರಿವಿಧಕ್ಕೆ ಸಿಕ್ಕಿ ಸಾವಿರ ನರಕಿಗಳು
ತಾವು ಗುರುವೆಂಬ ನಾಚಿಕೆ ಸಾಲದೆ ಹೇಳಾ ಕಲಿದೇವರದೇವಾ
Transliteration Hāgadāsegāgi hadineṇṭu jātiya tandu
śiṣyarendu māḍuva pariyanōḍā
avara ādi madhyāntavanariyade
tam'ma prāṇaliṅgava koṭṭu liṅgadrōhigaḷādaru
prasādava koṭṭu prasādadrōhigaḷādaru
pan̄cācārava hēḷi pan̄camahāpātakakke oḷagādaru
īṣaṇatrayavemba trividhakke sikki sāvira narakigaḷu
tāvu guruvemba nācike sālade hēḷā kalidēvaradēvā