ಅರಿದು ಲಿಂಗಸಂಗವಾದಲ್ಲಿ ಕಾಯವಳಿದರೇನು ?
ಕಾಯವುಳಿದು ಕೈಲಾಸಕ್ಕೆ ಹೋಗಬೇಕೆಂಬುದು,
ಜೀವನ ಉಪಾಧಿಕೆ.
ಘಟಮಟಪಟನ್ಯಾಯ ಇವೆಲ್ಲವು ಬಯಲೊಳಗು.
ಅರ್ಕೇಶ್ವರಲಿಂಗವನರಿದು ಕೂಡಿದ ಮತ್ತೆ,
ಅಂಗ ಸಿಕ್ಕುವುದಕ್ಕೆ ಠಾವಿಲ್ಲ.
Transliteration Aridu liṅgasaṅgavādalli kāyavaḷidarēnu?
Kāyavuḷidu kailāsakke hōgabēkembudu,
jīvana upādhike.
Ghaṭamaṭapaṭan'yāya ivellavu bayaloḷagu.
Arkēśvaraliṅgavanaridu kūḍida matte,
aṅga sikkuvudakke ṭhāvilla.