•  
  •  
  •  
  •  
Index   ವಚನ - 52    Search  
 
ತ್ರಿಸಂಧಿಯಲ್ಲಿ ಧ್ಯಾನ ಮರವೆಯೆಂದು, ಮಣಿಮಾಲೆಯಲ್ಲಿ ಅಗಣಿತನ ಎಣಿಕೆಯಿಂದ ಅರಿದೆಹೆನೆಂದು, ಸಿಕ್ಕಿತ್ತು ಧ್ಯಾನ ಜಪದ ಕೃತ್ಯದಲ್ಲಿ. ಆ ಜಪ ಧ್ಯಾನ ಭಾವ ಸಂಚಾರವಿಲ್ಲದೆ ಭಾವಿಸಿದಲ್ಲಿ ಜಪ ಸಂದಿತ್ತು. ನೇಮಭಾವದಲ್ಲಿ ಅಡಗಿತ್ತು, ಅರ್ಕೇಶ್ವರಲಿಂಗವನರಿದ ಕಾರಣ.
Transliteration Trisandhiyalli dhyāna maraveyendu, maṇimāleyalli agaṇitana eṇikeyinda aridehenendu, sikkittu dhyāna japada kr̥tyadalli. Ā japa dhyāna bhāva san̄cāravillade bhāvisidalli japa sandittu. Nēmabhāvadalli aḍagittu, arkēśvaraliṅgavanarida kāraṇa.