ಶಿಲೆಯೊಳಗಣ ಉರಿ ಅಡಗಿಪ್ಪಂತೆ,
ಬಲುಗೈಯನ ಕೋಲೆ ಉಡುಗಿಪ್ಪಂತೆ,
ಸಲೆ ಗರಳ ಕೊರಳೊಳಗೆ ಹೊರಹೊಮ್ಮದಂತೆ,
ಅರ್ಕೇಶ್ವರಲಿಂಗನ ತೊಡಿಗೆ ಹೀಗಾಗಬೇಕು.
Transliteration Śileyoḷagaṇa uri aḍagippante,
balugaiyana kōle uḍugippante,
sale garaḷa koraḷoḷage horahom'madante,
arkēśvaraliṅgana toḍige hīgāgabēku.