ಮನ ಬುದ್ಧಿ ಚಿತ್ತ ಅಹಂಕಾರವೆಂಬ
ನಾಲ್ಕು ಲೋಹದಿಂದ ಸರ್ವೇಂದ್ರಿಯದ ಮೊತ್ತ.
ಮನ ವಸ್ತುವ ಮುಟ್ಟದೆ, ನಿಜನಿಷ್ಠೆಯನರಿಯದೆ,
ಬಹುಮೊತ್ತದ ಮಾತಲ್ಲದ ಮಾತನಾಡುವದು,
ಕಳ್ಳವಣ, ಸಲ್ಲದ ತಾರ ಇವೆಲ್ಲವ ತಿಳಿದು
ಕಂಬಳಿಯ ಚೀಲದವನ ಬೆಂಬಳಿಯಲ್ಲಿ ಬನ್ನಿ.
ನಿಮಗಲ್ಲದ ಒಡವೆಯನೊಳ್ಳಿತ್ತು ಮಾಡಿಕೊಡುವೆ,
ಊರ್ಧ್ವರೇತೋಮೂರ್ತಿ ಶ್ವೇತ ಸ್ವಯಂಭು
ಕಪಿಲೇಶ್ವರಲಿಂಗ ಸಾಕ್ಷಿಯಾಗಿ.
Transliteration Mana bud'dhi citta ahaṅkāravemba
nālku lōhadinda sarvēndriyada motta.
Mana vastuva muṭṭade, nijaniṣṭheyanariyade,
bahumottada mātallada mātanāḍuvadu,
kaḷḷavaṇa, sallada tāra ivellava tiḷidu
kambaḷiya cīladavana bembaḷiyalli banni.
Nimagallada oḍaveyanoḷḷittu māḍikoḍuve,
ūrdhvarētōmūrti śvēta svayambhu
kapilēśvaraliṅga sākṣiyāgi.